ನಮ್ಮ ಬಗ್ಗೆ
೧೯೭೧ರಲ್ಲಿ ಗ್ರಂಥಾಲಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಕೆಲವು ಕನ್ನಡಾಭಿಮಾನಿಗಳು ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳಲ್ಲಿ (ಆಗ ರಾಷ್ಟ್ರೀಯ ವೈಮಾನಿಕ ಪ್ರಯೋಗಶಾಲೆಯಾಗಿತ್ತು) ಕನ್ನಡ ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಿದರು. ಅನಂತರ ೧೯೭೪ರಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯರ್ಥಿಗಳಿಗೆ ಮತ್ತು ಸಾಮಾನ್ಯ ಜನರಿಗೆ ಸುಲಭವಾಗಿ ರ್ಥವಾಗುವಂತೆ ಪ್ರಯೋಗಶಾಲೆಯ ಹಲವಾರು ವಿಜ್ಞಾನಿಗಳು ಕನ್ನಡದಲ್ಲಿ ಲೇಖನಗಳನ್ನು ಬರೆದುಕೊಡುವ ಆಸಕ್ತಿ ತೋರಿಸಿದರು. ಅಲ್ಲದೆ ವಿದ್ಯರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಸ್ಪರ್ತಿ ನೀಡಲು ಪ್ರಬಂಧ ಸ್ರ್ಧೆಗಳನ್ನು ರ್ಪಡಿಸಿ,ತರ್ಪುಗಾರರು ಆಯ್ಕೆಮಾಡಿದ ಲೇಖನಗಳನ್ನು ಪ್ರಕಟಿಸುವ ನರ್ಧಾರ ಸಹ ಮಾಡಲಾಯಿತು. ಈ ಲೇಖನಗಳನ್ನು ಒಳಗೊಂಡ ಒಂದು ವರ್ಷಿಕ ಪತ್ರಿಕೆಯನ್ನು ಹೊರತರಲು ಸಂಘವು ತರ್ಮಾನಿಸಿತು. ಅಂದಿನ ಪ್ರಯೋಗಶಾಲೆಯ ನರ್ದೇಶಕರು ಇದಕ್ಕೆ ಪ್ರೋತ್ಸಾಹ ನೀಡಿದರು.
ಈ ಪತ್ರಿಕೆಗೆ ಕಣಾದ ಎಂಬ ಋಷಿಯ ಹೆಸರಿನಿಟ್ಟು ನಾಮಕರಣ ಮಾಡಲಾಯಿತು. ಈ ಪತ್ರಿಕೆಯನ್ನು ಪ್ರತಿ ರ್ಷ ರ್ನಾಟಕ ರಾಜ್ಯೋತ್ಸವದಂದು ಬಿಡುಗಡೆ ಮಾಡಲಾಗುತ್ತಿದೆ. ಇದನ್ನು ಬಿಡುಗಡೆ ಮಾಡಲು ಕನ್ನಡದ ಕಣ್ಮಣಿಗಳಾದ, ಡಾ. ಶಿವರಾಮ ಕಾರಂತ, ಡಾ.ಯು.ಆರ್.ಅನಂತ ಮರ್ತಿ, ಜಿ.ಪಿ.ರಾಜರತ್ನಂ, ಜಿ.ಶಿವರುದ್ರಪ್ಪ, ಪು.ತಿ.ನರಸಿಂಹಚಾರ್, ಎಮ್.ವಿ.ಸೀತಾರಾಮಯ್ಯ, ಜಿವಿ, ಬೀಚಿ, ಹೀಗೆ ಹಲವಾರು ಗಣ್ಯರು ಅತಿಥಿಗಳಾಗಿ ಆಗಮಿಸಿದ್ದರೆಂದು ಹೇಳಲು ಬಹಳ ಹೆಮ್ಮೆಯಾಗುತ್ತದೆ. ಇದುವರೆಗೆ ೫೦ ಸಂಚಿಕೆಗಳು ಹೊರಬಂದಿವೆ.